ವಿಷದಷ್ಟವಾದ ನರನ, ಗಾರುಡಮಂತ್ರೌಷಧದಿಂದ
ಆರೋಗ್ಯಕಾಯನ ಮಾಡುವಂತೆ,
ಶೈವಗುರುವಿನ ಕೈಯಲ್ಲಿ ಮಂತ್ರೋಪದಿಷ್ಟನಾದ ಶಿಷ್ಯಂಗೆ,
ವೀರಶೈವದ ಮಂತ್ರೋಪದೇಶದಿಂದ
ಆತನ ಕಾಯಶುದ್ಧನ ಮಾಡಿ,
ಆತನ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ತುಂಬಿ,
ಆತನ ಅಂಗದ ಮೇಲೆ ಲಿಂಗವ ಬಿಜಯಂಗೈಸಿ,
ಕೃತಕೃತ್ಯನಂ ಮಾಡಿದ ನಮ್ಮ ವೀರಶೈವಗುರು,
ಕೂಡಲಚೆನ್ನಸಂಗಮದೇವ.