Index   ವಚನ - 396    Search  
 
ಸುಖಸಾರಾಯ ಸುಶೀಲರನುವ, ಸುಖಸಾರಾಯರೆ ಬಲ್ಲರು. ನಿಸ್ಸೀಮರು ನಿಸ್ಸೀಮರು ನೆರೆವಲ್ಲಿ ಪರಮಸುಖಿಗಳ ಬಲ್ಲರು. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಲಿಂಗೈಕ್ಯರನುವ ಲಿಂಗೈಕ್ಯರೆ ಬಲ್ಲರು.