Index   ವಚನ - 397    Search  
 
ಸುಟ್ಟ ಬೂದಿಯೊಳಗೊಂದು, ಸುಡದ ಬೂದಿಯ ಕಂಡೆ, ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ ಗುಟ್ಟನಾರು ಕಂಡುದಿಲ್ಲ. ನಾನು ಆತನನರಿದು ಶರಣೆಂದು ಬದುಕಿದೆ. ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ.