ವ್ರತಸ್ಥ ವ್ರತಸ್ಥರೆಲ್ಲ ಗತಿಯನು ಕಾಣದೆ ಭ್ರಾಂತುಗೇಡಿಗಳಾದರಯ್ಯ.
ಪ್ರತಿಗೆ ಪ್ರತಿ ಗುರುವೆನಬಹುದೆ?
ಪ್ರತಿಗೆ ಪ್ರತಿ ಲಿಂಗವೆನಬಹುದೆ?
ಪ್ರತಿಗೆ ಪ್ರತಿ ಜಂಗಮವೆನಬಹುದೆ?
ಎಂದ ಕಾರಣದಿಂದಲಿ ಮತಿ ತಪ್ಪಿ ಮೂರ್ಖರಾದರು.
ಸರೀಕರೆಂಬುತ ಅತಿಪ್ರಕಾಶವಡಗಿತ್ತು,
ಮನದೊಳು ಸಂಚಲ ಪುಟ್ಟಿತ್ತು,
ಕೃತಯುಗ ಹೇಮ, ತ್ರೇತಾಯುಗ ಬೆಳ್ಳಿ, ದ್ವಾಪರ ತಾಮ್ರ
ಕಲಿಯುಗಕ್ಕೆ ಕಲ್ಲಾಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Vratastha vratastharella gatiyanu kāṇade bhrāntugēḍigaḷādarayya.
Pratige prati guruvenabahude?
Pratige prati liṅgavenabahude?
Pratige prati jaṅgamavenabahude?
Enda kāraṇadindali mati tappi mūrkharādaru.
Sarīkarembuta atiprakāśavaḍagittu,
manadoḷu san̄cala puṭṭittu,
kr̥tayuga hēma, trētāyuga beḷḷi, dvāpara tāmra
kaliyugakke kallāyitu kāṇā
ele nam'ma kūḍala cennasaṅgamadēvayya.