Index   ವಚನ - 30    Search  
 
ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದಡೇನಯ್ಯ, ಪಾಡಿಗೆ ಪಂಥ ಪರಾಕ್ರಮ ಪರದಳವಿಭಾಡನಪ್ಪನೆ? ಕೋಡಗನ ಕೈಯಲ್ಲಿ ರತ್ನವಿದ್ದರೆ ರಾಜ್ಯರಾಷ್ಟ್ರದೊಳು ಬೆಲೆಗಾಂಬುದೆ? ಮೋಡಕ್ಕೆ ಬಾಯ್ದೆರೆದರೇನು ಕಾಲ[ವ]ಕಾಲಕ್ಕೆ ಮಳೆಬಹುದೆ? ಹೂಡುವರೆ ಕೋಣನ ಕುದುರೆಯ ರಥಶೃಂಗಾರಕ್ಕೆ? ಕಾಡಿನಲ್ಲಿ ಕರೆದು ಮಳೆ, ಓಡಿನೊಳು ಎರದು ನೀರು ಮಾಡುವ ಕ್ರಿಯದ ಪೂಜೆಯು. ಬೇಡನ ಬೇಟೆಯ ನಾಯಿ ಮೊಲನ ಕಂಡು ಅಚ್ಚರಿಸಿದಂತಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.