Index   ವಚನ - 31    Search  
 
ಬಲ್ಲೆ ಬಲ್ಲೆನೆಂಬ ಅಹಂಕಾರಿಗೆ ಸಲ್ಲದು ಭಕ್ತಿ. ಹುಲ್ಲು ಬೆಂಕಿಯೊಳು ಕೆಂಡವು ನಿಲ್ವುದೆ, ಹುದುಗಿ ಮುಚ್ಚಿದರೆ? ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮತೇಜಿ ಅಪ್ಪುದೆ? ಎಲ್ಲಿಯ ಭಕ್ತಿ, ಸಲ್ಲದು ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.