Index   ವಚನ - 35    Search  
 
ಮೂರರೊಳಗೆ ಮುಣುಗಿ ಮುಖಭಂಗಿತರಾದರು ಮುನ್ನಿನ ಹಿರಿಯರು. ವೀರಧೀರತ್ವರು ಎಲ್ಲ ವಿವೇಕಗೆಟ್ಟರು, [ಅರುಹು]ವಿಡಿಯದ ಕಾರಣದಿಂದ, ದಾರಿಯನ್ನು ತಪ್ಪಿ ಅಡವಿಯ ಕೂಡಿದರು. ಮೂರರ ಮೇರೆಯನು ಕಾಣದೆ ವಾರಕ ಮೂರನು ತನ್ನದುಯೆಂದ ಕಾರಣದಿಂದಲಿ ಜಾರೆಯರಾದರು. ಹೋರಿಹೋರಿ ಗತಭ್ರಷ್ಟರಾದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.