Index   ವಚನ - 36    Search  
 
ನೆಳಲು ಅಪ್ಪೆನೆಂಬ ಅರೆಮರಳು ಭ್ರಾಂತನೆ ಕೇಳಯ್ಯ ತಿಳಿ ನಿನ್ನೊಳು ನೀನು ತ್ರಿಪುರದ ಮಾರ್ಗವನು, ಸುಳುಹಿನೊಳು ಸೂಕ್ಷ್ಮ ಸುಖದುಃಖಂಗಳು, ಬೆಳೆದುಯಿದೆ ಭೇದಾಭೇದವು, ಮೊಳೆ ಚಿವುಟಿ(ಟ?)ದ ಕಾರಣದಿಂದಲಿ ಹೆಮ್ಮರನಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.