Index   ವಚನ - 37    Search  
 
ಸತಿಗೆ ಸದ್ಗತಿ, ತನ್ನ ಪತಿಯಿಂದಲಾದುದು ಅಲ್ಲದೆ ಅತಃಪರದೈವ ಉಂಟೇನಯ್ಯ? ಮಥನ ಇಬ್ಬರಿಗೆ ಮಾಯಾಸಂಸಾರದೊಳು, ಮರ್ಕಟರಾದರು ಮತಿಗೆಡುವರು ಮನದೈವಮಂ ಬಿಟ್ಟು ಮಾರ್ಗಕೆಟ್ಟು ವ್ರತವಿನಾಶವು. ರಥ ಮುರಿವುದು ಆ ಕ್ಷಣವಳಿವುದು ರಕ್ಷಣೆ ತಪ್ಪುವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.