Index   ವಚನ - 39    Search  
 
ಇಟ್ಟಿಟ್ಟ ಕಲ್ಲಿಗೆ ಹರಿದಾಡುವರು ನೆಟ್ಟನೆ ಜ್ಞಾನಿಗಳಪ್ಪರೇನಯ್ಯ? ಪಟ್ಟಾಭಿಷೇಕವುಳ್ಳ ರಾಜನ ಬಿಟ್ಟು ರಾಜ್ಯಭ್ರಷ್ಟರಾಪರೇ? ಹುಟ್ಟುವ ಹೊಂದುವ ಬ್ರಹ್ಮನ ಕಾಣದೆ, ತಮ್ಮ ಮನಸಿನ ಇಚ್ಚೆಗೆ ಹರಿದಾಡುವರು ಭ್ರಷ್ಟತ್ವವಾಗಿ, ಪೊಗಳುತಿವೆ ವೇದವಾಕ್ಯ ಅತ್ಮವೆ ಎಂಬುತ. ರಟ್ಟಮತಕೆ ಸರಿಪ್ರತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.