ಉದಯ ಅಸ್ತಮಯವು ನದಿಯೊಳು ಮುಳುಗಿ
ಗದಗದನೆ ನಡುಗಲು ಗರ್ಭಕ್ಕೆ ವೈರವು.
ಶುದ್ದ ಮಂತ್ರವು ಮರೆದು ಸೂಕ್ಷ್ಮವ ತಿಳಿಯದೆ
ಗದಬಡಿಸಿ ಎಮ್ಮೆ ಮಡುವಿನೊಳು ಬಿದ್ದಂತೆ ವ್ಯರ್ಥ ಸ್ನಾನವು,
ಪದರ ಅತ್ಮದೊಳು ಸೂತಕ ಎಂದ ಆ ಗತವು ಹಿಂಗದು,
ಮದಹೊಲೆಯಿಂದ ಪುಕ್ಕಟ ಜ್ಞಾನಿ ಅದ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Udaya astamayavu nadiyoḷu muḷugi
gadagadane naḍugalu garbhakke vairavu.
Śudda mantravu maredu sūkṣmava tiḷiyade
gadabaḍisi em'me maḍuvinoḷu biddante vyartha snānavu,
padara atmadoḷu sūtaka enda ā gatavu hiṅgadu,
madaholeyinda pukkaṭa jñāni ada kāṇā
ele nam'ma kūḍala cennasaṅgamadēvayya.