Index   ವಚನ - 47    Search  
 
ನಾನೆಂಬ ಬ್ರಹ್ಮನ ನುಂಗಿದಳು ಮಾಯೆ, ನಾನೆಂಬ ವಿಷ್ಣುವ ನುಂಗಿದಳು ಮಾಯೆ, ನಾನೆಂಬ ರುದ್ರನ ನುಂಗಿದಳು ಮಾಯೆ; ಅಜ್ಞಾನ ತ್ರಿವಿಧವ ನುಂಗಿ, ನಯನದೊಳು ಬೊಂಬೆಯಾದಳು ಮಾಯೆ. ನಾನೆಂಬ ಮಾಯೆಯನು ನುಂಗಿ ಗುಹೇಶ್ವರ ಅಭ್ರಚ್ಛಾಯವಾದನು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.