ಬಲ್ಲ ಬಲ್ಲಿದರನೆಲ್ಲ ಬರಿಮಾಯೆ ನಂಗಿತ್ತು.
ಸೊಲ್ಲಿನ ಮೃದುವಾಕ್ಯ, ಸಾರಾಯವನೆಲ್ಲ
ಛಲಮಾಯೆ ನುಂಗಿತ್ತು.
ಅಲ್ಲ ಹೌದು ಎಂಬ ಸಂದುಸಂಶಯವನೆಲ್ಲ
ಕಲಿಮಾಯೆ ನಂಗಿತ್ತು.
ಬಿಲ್ಲು ಹೆದೆ ಅಂಬು ನುಂಗಿ ಬಿರುದಂಕವ ನೆಟ್ಟಂತೆ,
ಎಲ್ಲವು ನಾನೆಂಬ ಅಹಂಕಾರವು ಮಾಯೆ,
ನಿರಹಂಕಾರವು ತಾಯೆ,
ಅಲ್ಲಿ ಎತ್ತಿ ಎಲ್ಲರೊಳು, ಶಿವಶಕ್ತಿ ಶಕ್ತಿಯೋಶಿವ
ಬಲ್ಲಬಲ್ಲಿದರು ಸೂರೆಹೋದರು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Balla ballidaranella barimāye naṅgittu.
Sollina mr̥duvākya, sārāyavanella
chalamāye nuṅgittu.
Alla haudu emba sandusanśayavanella
kalimāye naṅgittu.
Billu hede ambu nuṅgi birudaṅkava neṭṭante,
ellavu nānemba ahaṅkāravu māye,
nirahaṅkāravu tāye,
alli etti ellaroḷu, śivaśakti śaktiyōśiva
ballaballidaru sūrehōdaru kāṇā
ele nam'ma kūḍala cennasaṅgamadēvayya.