Index   ವಚನ - 53    Search  
 
ತ್ರಿಗುಣಾತ್ಮ ತ್ರಿಸಂಧಿ ಕಾಲಪ್ರವರ್ತನೆಯ ವೇಧಿಸಿ, ತ್ರಿವಿಧ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣಿಸಿ, ತ್ರಿಭುವನ ಏಕಾಂಗ, ಯಥಾಲಿಂಗ, ತಥಾ ಜಂಗಮ ಸನ್ಮತ ಗುರು ತ್ರಿಶೂಲಿ, ಆಣವಮಲ, ಮಾಯಾಮಲ, ಕಾರ್ಮಿಕಮಲ [ಮಲ]ತ್ರಯಮಂ ಬಂಧಿಸಿ, ತ್ರಿಪುಂಡ್ರ ತೃಣಮಾಲಾ ಧರಿಸಿ ತ್ರಿಯಕ್ಷರ ಪ್ರಮಾಣ ಉಚ್ಛರಿಸಿ, ಊರ್ಧ್ವದಲ್ಲಿ ನಿಲಿಸಿ ತ್ರಿವಿಧವ ಕಾಣಬಲ್ಲರೆ, ತ್ರಿಭಂಗದೊಳು ಷಡ್ಭಾಗವಪ್ಪುದು ತ್ರಿಕಾಲಜ್ಞಾನ ಖಂಡಜ್ಞಾನ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.