Index   ವಚನ - 52    Search  
 
ಯಾವಕಾಲ ತಪ್ಪಿದರೆ ಸಾವಕಾಲ ತಪ್ಪದು ಎಂಬ ದೇವದ್ರೋಹಿಗಳು ಎತ್ತಬಲ್ಲರಯ್ಯ? ಕೇವಲ ಶರಣಸ್ಥಲಗಳ ಗಾವುದದೊಳಗೆ ಸೆರೆಸೂರೆ, ಮುಂದೆ ರಾಮರಾಜ್ಯ ಎಂಬರು. ಗಾವುದ ಅತ್ಮ, ಪಾವಕ ಕಳ, ಅದು ಮೀರಿದರೆ ಅತ್ತತ್ತ ರಾಮರಾಜ್ಯ. ಗೋವಿನ ಕ್ಷೀರವ ಗೊಗ್ಗಯ್ಯ ಬಲ್ಲನೆ(ನು?) ಗೌಪ್ಯಾರ್ಥವ. ಯಾವಕಾಲ ತಪ್ಪಿದರೆ ಸಾವಕಾಲ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.