Index   ವಚನ - 59    Search  
 
ನಾನು ನೀನು ಎಂಬ ಸಂದೇಹಿಯೊಳು, ಪುಟ್ಟಿದುವಯ್ಯ ಜ್ಞಾನ ಅಜ್ಞಾನ ಎಂಬುವೆರಡು. ಕೊನೆ ಬುಡ ನಂಬಿಗೆ ಅಪನಂಬಿಗೆ. ಧ್ಯಾನರೂಢದಲಿ ಅಜ್ಞಾನವೆಂಬ ಅಂಕುರವು(ವ?) ಚಿವುಟಬಲ್ಲರೆ, ಮಾನವ ಅಂಧ ಕಾವಳ ಹರಿವುದು. ಬೇನೆ ಬಂದರೆ ಶರೀರಕ್ಕೆ ಲಘುವಾದಂತೆ ಅಪ್ಪುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.