Index   ವಚನ - 60    Search  
 
ಸಕಲಯಾತ್ರೆ, ಸಮಸ್ತ ಪರ್ವತ, ಪುಣ್ಯಕ್ಷೇತ್ರಾದಿಗಳೆಲ್ಲ ಮಕಾರತ್ವದೊಳು ಮಡಗಿದ್ದವು ಕಾಣಾ. ಓಂಕಾರ ನಕಾರ ಮಕಾರ ತ್ರಿಯಕ್ಷರದ ತ್ರಿಶೂಲಿ, ಉತ್ಪತ್ತಿ ಸ್ಥಿತಿ ಲಯ, ಪ್ರಖರ ಪ್ರಖರ ಪ್ರಣಮವೆಂದು ಅರಿಯುವೆ; ಪ್ರಕಾಶವೆಂದರೆ ಅವೆ, ಪ್ರಾಣಹತವೆಂದರೆ ಅವೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.