Index   ವಚನ - 428    Search  
 
ಹೊನ್ನು ಮುರಿದಡೆ ಬೆಸಸಬಹುದಲ್ಲದೆ, ಮುತ್ತು ಒಡೆದಡೆ ಬೆಸಸಬಹುದೆ? ಮನ ಮುರಿದಡೆ ಮನಕೊಬ್ಬರೊಡೆಯರುಂಟೆ? ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.