Index   ವಚನ - 72    Search  
 
ಕರ್ಮದಿಂದ ಧರ್ಮ, ಕ್ರಿಯೆಯಿಂದ ನಿಃಕ್ರಿಯಾ ವರ್ಮಿಸ ನಿರ್ವರ್ಮಿಸ, ನಿಶ್ಚಯತ್ಮ ನಿತ್ಯಕೃತ್ಯ ಧರ್ಮಕೆ ಅಧರ್ಮವೇ ಬುಡ. ಅಂಕುರೂಪು ಮಾಳ್ಪುದು, ನಿರ್ಮಳ ನಿರಾದಿ ನಿರ್ಧರ ನಿತ್ಯಂಗೆ. ನಿರ್ಮೋಹಿ ಮೋಹಿ ಅನಿಮಿಷ ಜ್ಞಾನಿ ಅಜ್ಞಾನಿ. ನಿಮಿತ್ಯ ಕಲ್ಪನೆ ನಿರೂಪು ರೂಪು. ಭುಕ್ತಿ ಭಕ್ತಿ ಕರ್ಮಿಗಳೆಂದು ಕಾಬುದೆ ಕರುಣ ಕೃಪೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.