Index   ವಚನ - 74    Search  
 
ದಾನಧರ್ಮ, ಪರೋಪಕಾರ, ದಯೆ ದಾಕ್ಷಿಣ್ಯ ದಿನದಿನದಲಿ ಗಳಿಸುವುದು ಸ್ವಯವ ನಿರ್ದಯವ ಆ ಕ್ಷಣ. ಮಾನಿತಗೆ ಏತಕೊ ದಾನಧರ್ಮಪರೋಪಕಾರ? ಅನಂತ ಕಲ್ಪನೆಗೆ ಕೊಟ್ಟ ಕ್ಷುತ್ತಿನ ತೃಪ್ತಿ, ಪ್ರಾಣಕ್ಕೆ ಪಡಿಯ ನಾ ನೀಡಿದೆ ನಾ ಮಾಡಿದೆನೆಂಬ ಅಹಂಗರ್ವದಿಂದ ನಾನಾದೆ ಯಮಪ್ರಾಪ್ತಿ. ನಾನಾಯೋನಿಗೆ ಶ್ವಾನದೇಹವ ತಾಳಿಬಂದು, ಕೂಟಮಾಟದೊಳು ಮುಖದಿರುಗಿದಂತೆ. ಏನು ಮಾಡಿದರೂ ಇಲ್ಲ ನಿನ್ನ ಕೃಪೆ ಅದಲ್ಲದೆ ನಾನೆಂಬ ಜನ್ಮಕ್ಕೆ ನರಕ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.