Index   ವಚನ - 79    Search  
 
ಹಿಂದುವ ಮುಂದುವ ನಂಬುವರು ಒಂದುಗರ್ಭದೊಳು ಹುಟ್ಟಿ, ಹಿಂದಾದ ಕ್ರಿಯೆ ಮುಂದಾದ ನಿಃಕ್ರಿಯೆ, ಬಂಧನವೆರಡು ಜ[ನಿ]ತಕ್ಕೆ. ಬಲ್ಲಿದರಿಗೆ ಬಲ್ಲಿದರಾಗಿ, ಹಿಂದು ಹರಿದು ಮುಂದು ಹರಿದು, ಒಂದುಮಾಡಿ ನಡೆಸಿದೆವೆಂಬ ಅನುಜ್ಞೆಯಿಂದ ಬಂದರು[ತಂದರು?]. ತಂದವರ ಕೂನ ತಂದವರು ಬಲ್ಲರಲ್ಲದೆ, ಮುಂದೆ ಯಾರು ಅರಿಯರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.