ಉಳುವೆಯ ಸಮಯದ ಮುಂದೆ
ಹಳಿವರೇನ ಬಲ್ಲರಯ್ಯ?
ಕಳೆವರೆ ವಿಧವುಂಟು ಕರ್ಮದ ಭವಪಾಶ.
ಸುಳುಹು ಸೂಕ್ಷ್ಮದಲ್ಲಿ ಅರಿವಿದು ಶುಭಸೂಚನೆ.
ಒಳಗುಂಟಾದರೆ ಎಸೆವುದು ಪರಿಮಳ.
ತಿಳಿದ ತೆಂಗಿನ ನೀರು ಒಳಗೆ ಹುಟ್ಟುಗೊಂಡಂತೆ ನಿಮ್ಮ ಕೃಪೆ.
ಹೆಳವರ ಮೇಲೆ ಭಾಗ್ಯ ಬಂತೆಂಬರು.
ಕಳೆವರೆ ಉಳಿವರೆ ಎನ್ನಳವಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.