ಒಬ್ಬರಿಗೆ ಹೇಳಿ ತಾ ನಡೆಯದವರ ಸಂಗ,
ಗೊಬ್ಬರದೊಳಗಣ ಚೇಳಿನಂತೆ.
ಹುಬ್ಬು ಹಾಕುತ್ತಿಪ್ಪ ಹುಸಿಕರ ಕಂಡರೆ ಹುಸಿ,
ದಿಟರ ಕಂಡರೆ ದಿಟ
ಹುಬ್ಬಿಸುವ ಮಾತಿನ ಮಾಲೆಯ ಮರ್ಕಟನಂತೆ.
ಇಬ್ಬದಿಗನ ಇಹದಲ್ಲಿ ನಿಂತವಂಗೆ ಇಹಪರವಿಲ್ಲ.
ಉಬ್ಬಿಸುವ ಉಲಿಗಿತ್ತಿಯಂತೆ ಊರಗಂಟಿಗೆ,
ಹಬ್ಬವ ಮಾಡಿದವರ ಮನೆಗೆ ಹಾಡಬಂದಂತೆ.
ಸರ್ಪಗ್ರಹಣ ಹಿಡಿದಿದೆ ಇಂತು ಇಚ್ಚಕರಿಗೆ.
ಅರ್ಬೂತವೆಬ್ಬಿಸಲಿಕೆ ಆಗಮದ ಒಡೆಯ ಬಂದ.
ಒಬ್ಬನ ಬೋಧೆಯಲ್ಲದೆ ಇಲ್ಲ ಇನ್ನು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Obbarige hēḷi tā naḍeyadavara saṅga,
gobbaradoḷagaṇa cēḷinante.
Hubbu hākuttippa husikara kaṇḍare husi,
diṭara kaṇḍare diṭa
hubbisuva mātina māleya markaṭanante.
Ibbadigana ihadalli nintavaṅge ihaparavilla.
Ubbisuva uligittiyante ūragaṇṭige,
habbava māḍidavara manege hāḍabandante.
Sarpagrahaṇa hiḍidide intu iccakarige.
Arbūtavebbisalike āgamada oḍeya banda.
Obbana bōdheyallade illa innu kāṇā
ele nam'ma kūḍala cennasaṅgamadēvayya.