ಹಾರುವ ಹಾರೈಸಿ ತನ್ನೊಳು,
ದೂರವಿಲ್ಲ ಹೊಲೆಯನೆನಿಸಿದ ತನ್ನೊಳು,
ಆರಂಬಗೆ ಇಂಥ ವಿಷಯ ತನ್ನೊಳು,
ಮಾರಾಟ ಮಾತಿನಮಾಲೆಯೆಂಬ ಬಣಜು ತನ್ನೊಳು,
ಸೀರೆಯ ನೇಯ್ವ ಜಾಡ ದೇವಾಂಗ ತನ್ನೊಳು,
ಮಾರುವ ಕುಂಬಾರ ಆಹಾರ ದೇಹಾರ ತನ್ನೊಳು,
ಕರಿಯ ಪಾಂಚಳ ನಿರ್ಮಿತ ಪಂಚವಿಷಯ ತನ್ನೊಳು,
ಬೇರೆಯಿಲ್ಲ ಕುರುಬ ಹೆಡ್ಡು ಹೇಕುಳಿ ತನ್ನೊಳು,
ನೂರೊಂದು ಕಾಯ ತನ್ನೊಳು, ಕುಲವು ತನ್ನೊಳು.
ತೋರಿದರೆ ವಿಶ್ವವ ತೋರಬಹುದು,
ಆತ್ಮವ ಹೊಂದಿದ ಆಧ್ಯಾತ್ಮ ತನ್ನೊಳು.
ಕಾರ್ಯ ಕಾರಣಕ್ಕೆ ಕುತರ್ಕವಿಲ್ಲದೆ ಕೂಡುವುದು ಐಕ್ಯಸ್ಥಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.