Index   ವಚನ - 106    Search  
 
ಎಂಬತ್ನಾಲ್ಕು ಲಕ್ಷ ಜೀವರಾಶಿ ಬೆಂಬಳಿ, ಒಂದೊಂದು ಕುಲ, ಒಂದೊಂದು ವರ್ಣ, ಒಂದೊಂದು ಭಾಷೆ ಉಂಬುದು ಉಡುವುದು, ಕೊಂಬುದು ಕೊಡುವುದು. ಬಂಬುದು ಮನುಷ್ಯ ಜನ್ಮ, ಒಂದೇ ವರ್ಣ ಒಂದಕೆ ಒಂದೊಂದು ಕೋಟಿ ಬೇಧ. ಇಂಬಿಲ್ಲ ನೋಡಿದರೆ, ಇದಕ್ಕೆ ಕಾಯಕ ಕುತರ್ಕ ಸಂಬಳವ ಕಟ್ಟಿಕೊಂಡಿತ್ತು. ಕಾಯಕಧರ್ಮವೆಂಬ ವರ್ಮದ ಮೂಲವ ನಂಬಿದ ಭಕ್ತರಿಗೆ ಜಾತಿಯಿಲ್ಲ. ಆಚಾರಕ್ಕೆ ವ್ರತವಿಲ್ಲ, ಆಕಾಶಕೆ ನೆಳಲಿಲ್ಲ. ಕುಂಭಿನಿಗೆ ಸೂತಕವಿಲ್ಲ, ಭೂಮಿಗೆ ಪಾತಕವಿಲ್ಲ. ನಂಬಿದರೆ ಪಂಚತತ್ವಕ್ಕೆ ಪ್ರಕಟವಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.