Index   ವಚನ - 109    Search  
 
ವೇಶ್ಯೆಯ ಕುಲವಾವುದು? ದಾಸಿಯ ಕುಲವಾವುದು? ಹಾಸುವಳು ಸೆರಗು ಹದಿನೆಂಟು ಜಾತಿಗೆ. ಹೇಸದ ಎಂಜಲತಿಂದು, ಹಿರಿದು ಕುಲ ನನ್ನದೆಂದು ಮೆರೆವ ಕಾಸುಗಳ್ಳರಿಗೆ ಕಾತುರವೇ ದೇವ? ಈಸು ಮಾತು ಯಾತಕ್ಕೆ ಇಂತಪ್ಪುದಕ್ಕೆ? ದಾಸಿಯಲ್ಲಿ ಗುಣವುಂಟು, ವೇಶ್ಯೆಯಲ್ಲಿ ಗುಣವುಂಟು, ಸರ್ವಜಾತಿ ಒಂದೆಂದು ಕಾಂಬುದು. ಮಾತಿನಂತೆ ಮನವಿದ್ದರೆ, ಈಶ್ವರ ಬೇರೆಯಲ್ಲ. ತ್ರಾಸಿನಂತೆ ಸಮತಟ್ಟಾದರೆ ತತ್ವವೆ ಕಟ್ಟಳೆ, ನಾಶವಾಗದು ಚಿನ್ನದ ಘಟ್ಟಿ, ನಂಬುಗೆಯೆಂಬುದು. ಪಾಶದಾಶೆ (ಆಶಾಪಾಶ?) ಬಿಟ್ಟವರಿಗೆ ಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.