Index   ವಚನ - 110    Search  
 
ವೇಶ್ಯೆಯ ಕಾಯಕ ಮುಂತು, ಸರ್ವ ಅಶನ ಕುಲಕಾಯಕ ಹಿಂತು, ಹೇಸಿಕೆ ಬಿಟ್ಟಿತ್ತು, ಸೂಸಿತ್ತು ಸರ್ವತ್ರ ಏಕವೆಂದು, ಆಸೆಯ ಬಿಟ್ಟ ದೊರೆ ಬಡವನೆ? ಏಕವೆಂದು ಅರಿತರೆ ನಾಶವಾಗದು. ಕಾಯಕ ಧರ್ಮ ಪಾಶವಂ ತೊಳೆವುದು. ದೂಷಣ ಮಿಕ್ಕಣ ಕಾಯಕ, ದೋಷ ದ್ರೋಹವು ಸಕಲ ಪ್ರಪಂಚ ವೇಶ್ಯೆಯ ಕಾಯಕವೆ ತುರೀಯ! ಮಿಕ್ಕ ಆಸರೆ ಕಾಯಕ ಅದರಿಂದ ಅಧಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.