Index   ವಚನ - 113    Search  
 
ಶಿವನ ಸತ್ಕರುಣೆ ಭಕ್ತಿಯ ಅಂತಿಂತೆಂದು ಉಪಮಿಸಲಳವೆ? ಜವೆ ಆಡಿದರೆ ಬೊಂಬೆ ಆಡವುದು. ಬೊಂಬೆಗೆ ಕಂಭ, ಕಂಭಕ್ಕೆ ಭೂಮಿ ನೆವದಿಂದ ಕಟ್ಟಿ ಆಡಿಸುವ ಸೂತ್ರವೆನಿಸಿತು ಭವಭವದಲ್ಲಿ ತಂದು(ಬಂದು?) ಭಕ್ತರು ಪುರಾತರು ಶರಣರೆನಿಸಿದರು. ಆವ ಕಾರಣದಲಿ ವಿನೋದಾರ್ಥಕೆ ತಂದೆ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.