Index   ವಚನ - 112    Search  
 
ಶಿವಭಕ್ತ ಶಿವಭಕ್ತನೆಂಬರು, ಶಿವಭಕ್ತನಾದ ಪರಿಯೆಂತು? ಭಕಾರತ್ವ ಭಾವ, ತಕಾರತ್ವ ತದ್ಭಾವ ಶಿಕಾರತ್ವ ಶಿವ, ವಕಾರತ್ವ ಬ್ರಹ್ಮ. ಭಾವೋ ಶಿವ, ಶಿವೋ ಭಾವ ಭಾವಂ ದ್ವೈತಾದ್ವೈತ, ಭಾವಂ ಶಿವೇಕವೃತ್ತಿ. ಶಿವಭಕ್ತಿ ಭಕ್ತಿತೃಪ್ತಿ, ಶಿವೇಕಸಿದ್ದಿ. ಭಾವಂ ಭಸಿತ, ಭಾವಂ ಭರಿತ. ಭವಭವಾಂತು ಭಕ್ತಾತ್ಮ ಶಿವ, ದೇವ ತಾ ದೇಹಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.