Index   ವಚನ - 115    Search  
 
ಅರ್ಪಿತಂಗಳು ಅನಾದಿ ಸಿದ್ಧಾರ್ಥ. ನಿಃಕ್ರಿಯ ಪ್ರಸಾದ ಕ್ರಿಯಾರ್ಪಿತ. ಕ್ರಿಯಾಪ್ರಸಾದ ಕ್ರಿಯಾರ್ಪಿತ ಅಕ್ರಿಯ ಕ್ರಿಯ, ನಿಃಕ್ರಿಯ ಸ್ವಯ. ಕೃತಯುಗ ತ್ರೇತಾಯುಗ ದ್ವಾಪರ[ಯುಗ] ಕಲಿಯುಗ, ಚತುರ್ಯುಗ ಸಹಸ್ರಾಣಿ ಬ್ರಹ್ಮಕಲ್ಪಿತ ಅಕ್ಷಯಧನ. ಕ್ರಿಯಾರ್ಪಣ ಕರ್ತವ್ಯ, ಭಾವಾರ್ಪಣ ಕರ್ತವ್ಯ ಕ್ರಿಯೋಭಾವ ಭಾವೋಕ್ರಿಯಾ ರೂಪನ್ನಾಸ್ತಿ ನಿಃಕ್ರಿಯ ನಿಜಸ್ವರೂಪ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.