Index   ವಚನ - 122    Search  
 
ಪಂಚಕಳಸವನಿಟ್ಟು, ಪ್ರಥಮಾಚಾರಕ್ಕೆ ಉಪದೇಶವ ಕೊಟ್ಟವರಾರು? ಪಂಚ ಆಯತ, ಪಂಚ ತತ್ವ, ಪಂಚ ಮಠ, ಪಂಚ ಘಟ ನಿಃಪ್ರಪಂಚಿ ಪೂರ್ವಾಚಾರಿ ಸಂಗನಬಸವಣ್ಣ. ಪಂಚೇಂದ್ರಿಯ ಕಲ್ಪಿತ ಪ್ರಯೋಗಿ, ಪ್ರಮಥಾದಿ, ಪಂಚ ಅಂಗುಲ ಚತುರ್ವಿಧ ಪ್ರತಿಷ್ಠಾಪನಾಚಾರ್ಯ, ಪಂಚಭೂತಾತ್ಮ ಘಟಮಠ, ಪಂಚಕೋಶ ಸಂಚಿತ, ಚಿದಾನಂದ ಚಿನ್ಮಯ ಸ್ವರೂಪ ಪಂಚವಕ್ತ್ರಪ್ರಮಾಣಿತ ಪರತ್ಯಾಗಿ, ಸಕಳಕಳಾಪ್ರವೀಣ ಪಂಚ ಅತೀತ ಭಕ್ತ, ಬಾರಮಾರ್ಗ ಸ್ಥಾಪನಾಚಾರ್ಯ ಪಂಚ ಅಂಗ ಅನಂಗಿ, ಪ್ರಭು ಪಟ್ಟಣದೀಶ್ವರ ಪಂಚಾರತಿ ಪ್ರಖ್ಯಾತ ಸದ್ಗುರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.