Index   ವಚನ - 121    Search  
 
ಭಕ್ತ ಯೋನಿಜನೆಂಬ ಉಭಯ ಭ್ರಷ್ಟರೆ ಕೇಳಿ: ಭಕ್ತಿಯ ತೋರಬೇಕಾಗಿ ಬಂದರು ಭವದಲ್ಲಿ. ನಿತ್ಯವನೈದುವರೆ ನಿಜಸ್ವರೂಪದೊಳು ಒಡಗೂಡಿದ್ದರು. ಸತ್ತು ಹೋಪ ಮಾನವರು ತಮ್ಮಂತೆ ಎಂಬರು. ಕರ್ತೃ ಆಕಾರಸ್ವರೂಪ, ನಿರಾಕಾರಸ್ವರೂಪ. ವ್ಯರ್ಥರರಿಯದೆ ಯೋನಿಜನೆಂಬರು. ಕೊರತೆ ಹೊಂದುವುದು, ಅಂತಿಂತೆಂದರೆ ಕೀಟಕ ಜನ್ಮ. ಭಕ್ತನ ಕಲ್ಪಿಸಿದಾತ ಕರುಣೆ, ನೀ ಬಲ್ಲೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.