Index   ವಚನ - 124    Search  
 
ಕ್ರಿಯಾಕರ್ಮ ವೇದವ್ಯಾಕ್ಯ, ನಿಃಕ್ರಿಯಾಕರ್ಮ ಶರಣವಾಕ್ಯ ಕ್ರಿಯಾವೇದ ಕರ್ಮ ಅಹುತ, ಶಿರಶ್ಛೇದನ ಬ್ರಹ್ಮ ಅರೆಮುಖ ಸಾಯಜ್ಯ ಷಡುಸ್ಥಲ ಬ್ರಹ್ಮ, ಕ್ರಿಯಾಸೂತಕ ನಿಃಕ್ರಿಯಾಸೂತಕ, ಕ್ರಿಯಾಜಾತ ನಿಃಕ್ರಿಯ ಅಜಾತ, ಕುತರ್ಕ ಕುಸಂಗಿ ಕ್ರಿಯೋಭಾವ, ಭಾವೋಕ್ರಿಯ ಐಕ್ಯ, ಆತ್ಮ ಷಡುಸ್ಥಲ ಬ್ರಹ್ಮ ಸ್ಥಾವರ ವೇದವಾಕ್ಯ, ಆತ್ಮ ನಿಶ್ಚಯ ಬ್ರಹ್ಮ ಅಮಳೋಕ್ಯ ಪೀಠಾರ್ಜವ ಕ್ರಿಯಾಕಲ್ಪಿತ ಭಕ್ತ, ನಿಃಕ್ರಿಯಾರ್ಪಿತ ಶಿವ ಸ್ತೋತ್ರ ಕಾಯಸಂಬಂಧ, ಸರ್ವತ್ರ ನಿನ್ನಂದ ಕ್ರಿಯೋ ಕಾಯ, ನಿಃಕ್ರಿಯಾ ಪ್ರಾಣ ನಿಸ್ತರಂಗ ನಿತ್ಯಕೃತ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.