Index   ವಚನ - 125    Search  
 
ದೇಹಿ ದೇಹವನೆ ಕಾಣದವಂಗೆ ಸಾಹಿತ್ಯವೆಲ್ಲಿಯದು ಅಯ್ಯ? ತಾಯ ಮಾರಿ ತೊತ್ತ ಕೊಂಬುವನಲ್ಲಿ ನ್ಯಾಯವನ್ನರಸುವರೆ? ಕಾಯಕಾಯಕದಲ್ಲಿ ಅರಿವುದೆ ಧರ್ಮ, ಮರೆವುದೆ ಕರ್ಮ ಗುಹೇಶ್ವರಲಿಂಗ ಬಾಹ್ಯಕ್ಕೆ ಬಾರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.