Index   ವಚನ - 127    Search  
 
ಕುರುಹಿಂಗೆ ಬಂಬರೆ ಅರುಹುಳ್ಳ ಲಿಂಗಾಂಗಿಗಳು? ಪರವ ಇಹದೊಳಗೆ ಇಟ್ಟಾತಂಗೆ ಕರಸ್ಥಲದಲ್ಲಿ ಕುರುಹ ಉಂಟೆ? ತರಿತರಿದ ಪತ್ರೆಪುಷ್ಪದ ಗಿಡವ ನೋಯಿಸಿ, ಎರೆ ಎರೆದು ಜಲವರತು, ಉರಿಉರಿವ ದೀಪ ಧೂಪವ ಸುಟ್ಟು, ನೆರೆನಂಬದೆ ಕುರುಹು ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ