Index   ವಚನ - 129    Search  
 
ಆತ್ಮ ಬ್ರಹ್ಮ ವಿಷ್ಣು ಮಹೇಶ್ವರಾದಿಗಳು ಮೂತ್ರಕುಕ್ಷೆಯಲ್ಲಿ ಉಂಟು ಎಂದು ಆಡುವರು. ನೇತ್ರ ಸ್ತೋತ್ರ ಗ್ರಹಣ ತ್ವಕ್ಕಿನಲ್ಲಿ ಸೂತ್ರವಾರು ಅರಸುತ್ತಿಹರು. ಕಾತರದಲ್ಲಿ ಕಣ್ಣುಗಾಣದವಂಗೆ, ವಾತ ಪಿತ್ತ ಶ್ಲೇಷ್ಮ ತ್ರಿದೋಷವಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.