Index   ವಚನ - 130    Search  
 
ಸ್ವಾತಿ ಅಪ್ಪುವಿಗಾಗಿ ಕಪ್ಪೆ ಬಾಯಿದೆರೆದು ಮುತ್ತು ಒಡೆಯಿತ್ತು. ನೀತಿ ನಿರುತಕ್ಕೆ ಭಕ್ತ ಬಾಯಿದೆರೆದು ತಾ ಮುಕ್ತನಾದ. ತತ್ ಆತ್ಮಸೋಂಕು ತ್ರಿಗುಣದಿಂದ ಸಜಾತಿ ವಿಜಾತಿ ಪುಟ್ಟತು. ಕುತರ್ಕಿಗೆ ಕುರುಹೆ ಲಿಂಗ, ಸ್ವತಂತ್ರಗೆ ಅರುಹೆ ಲಿಂಗ. ಹಿತ ಅಹಿತ ತನ್ನತನ್ನ ಶೀಲಕ್ಕೆ; ಸಾಲ ಭೋಕ್ತವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.