Index   ವಚನ - 135    Search  
 
ಕುಲವನೆತ್ತಿ ಕೇಳಿದರೆ ಮಲತ್ರಯದೊಳಗಣ ಕ್ರಿಮಿ. ಛಲವನೆತ್ತಿ ಕೇಳಿದರೆ ಜಲಸಂಖ್ಯೆಯೊಳಗಣ ತ್ರಸೆ(ಹಾವಸೆ?). ಹೊಲೆ ಮಾದಿಗೆ ಕೀಳಿಗನೆಂದರೆ, ರಜಸ್ಸೆ ಹೊಲೆ ಇಂದ್ರಿಯ ಮಾದಿಗೆ. ನೆಲೆಗಂಡ ಮಹಾತ್ಮಂಗೆ ಸ್ರೋತದ ಮುದ್ದೆ ಪಾತಕದ ಘಟ್ಟಿ. ಧಾತುವೆರೆದರೆ ಉರಿವುದು ಜಿಹ್ವೆಯಲ್ಲಿ. ಉತ್ತರ ಪ್ರತಿ ಉತ್ತರವೆಲ್ಲಿಹುದೊ? ಸಲೆ ಶಿವನಂದು ನಂಬಿದ ಅಕ್ಕಲವೆ ಕುಲ, ಅವರು ಒಕ್ಕು ಮಿಕ್ಕುದೆ ಪ್ರಸಾದ, ಹಲವು ಮಾತಿನ ಮಾಲೆಯಿಂದ ಹಸಗೆಡುವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.