Index   ವಚನ - 134    Search  
 
ಕೊಂಬರೆ ಕೊಡುವರೆ ಕುಲಾಚಾರವೆಂದಿರಿ; ಉಂಬರೆ ಉಡುವರೆ ಶಿವಾಚಾರವೆಂಬಿರಿ. ನಿಂಬಾಲ್ಯ ಕುಲಾಚಾರದ ಸುದ್ದಿಯ ನೀವತ್ತಬಲ್ಲಿರಯ್ಯ! ಡೊಂಬನಲ್ಲಿ ಹೆಣ್ಣು ಹೊನ್ನು ಇದ್ದರೆ ಹೇಸದೆ ಎರಗುವಿರಿ. ನಂಬಿಗೆ ಉಳ್ಳಡೆ ಕೇಳುವುದು ಕೊಳುಕೊಡೆ ಸಂಬಂಧವ. ಸಂಬಂಧವೆ ಹೇಮದ ಘಟ್ಟಿ, ಅದರಿಂಧ ಹೊನ್ನ ಹಂಬಲಿಸುವುದು. ಅರ್ಥಕಾಗಿ ಕೊಳು, ಕೊಡೆ ಸಂಬಂಧ, ಉಂಬರೆ ಅನ್ನ ಉದಕವೆ ಶಿವಾಚಾರ, ಬಂಬರೆ ಹೋಗುವರೆ ಉತ್ಪತ್ತಿ ಸ್ಥಿತಿ ಲಯ. ಏಕಾಂಬರನ ಭಕ್ತರಲ್ಲಿ ನಿಜವೆ ಕೊಳುಕೊಡೆ, ನಿತ್ಯತೃಪ್ತಿಯೆ ಶಿವಾಚಾರ. ಬಂಬ ಉತ್ಪತ್ತಿ ಲೋಕಮಧ್ಯ ಲೋಕಾಚಾರ. ಇಂಬುಗೊಂಬ ಪದ ಕೈಲಾಸ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.