Index   ವಚನ - 140    Search  
 
ಮಡಿವ ಜನ್ಮದ ಅರುಹು ದೇವಾದಿ ದೇವರ್ಕಳಿಗೆ ಇಲ್ಲ ಕಾಣಯ್ಯ ಸೋಹಂಭಾವ ಪಡೆದರೇನು, ಭೂತಪ್ರಾಣಿ ಲಿಂಗಪ್ರಾಣಿ ಅಪ್ಪನೆ? ಗೋವಿನಿಂದ ಉತ್ಪತ್ತಿಯಾದರು ತೆತ್ತೀಸಕೋಟಿ ದೇವರ್ಕಳು ಗೋಪತಿಯಿಂದ ಉತ್ಪತ್ತಿಯಾದ ಪರಮಭಕ್ತ. ಆ ಸತಿಪತಿಯಿಂದ ಅಜ್ಞಾನ ಜ್ಞಾನಾದಿಗಳು ಉದ್ಭವಿಸಿದವು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.