ನುಡಿದ ನುಡಿಯಲ್ಲಿ ಸುಶೀಲನಪ್ಪುದು.
ನಡೆದ ನಡೆಯಲ್ಲಿ ನಿರಂತರವಿಪ್ಪುದು.
ಒಡಲ ತೃಪ್ತಿಗಾಗಿ ಕೃತಾರ್ಥನಪ್ಪುದು.
ಕಡೆ ಖಂಡಿತ ಅಂದಿಗಂದಿಗೆಂದು ಒಮ್ಮನವ ಮಾಳ್ಪುದು.
ಉಡಲಿಲ್ಲದೆ ದಿಗಂಬರವಾದಡೇನು,
ದಿವ್ಯಸ್ವರೂಪನು ಅಲ್ಲಿ ಅಡಿಗಿಪ್ಪನೆ?
ನಮ್ಮ ವಸ್ತು ನಿರಂಜನನು?
ಬಡಮನಕೆ ಸಾಧ್ಯವಾಗದಯ್ಯ ಬಸವ ನಿಮ್ಮ ಭಕ್ತಿ.
ಕಡೆ ಆಣೆ ಬಣ್ಣ ಅಂತರದಲ್ಲಿ ಭಾವಭರಿತ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.