Index   ವಚನ - 145    Search  
 
ಸಂಸಾರವೆಂಬ ಹೊಳೆ ಬಹಳೆ ಬಿಗಿದು ಹರಿವುತಿದೆ. ಹಿಂಸೆ ಆದಿಯೆಂಬ ತೆರೆ ತೆಪ್ಪಗಳು ಅಡರವಲ್ಲಿ, ಮಾಂಸ ಆದಿಯೆಂಬ ಈಸುಗಾರ ಕಾಸೆಯಂ ಕಟ್ಟಿ, ದ್ವೇಷಮಂ ತೊಟ್ಟು ಕಾಂಕ್ಷೆ ಆಮಿಷವೆಂಬ ಕಾಲನು ಹೂಬಿಲ್ಲ ಹಿಡಿದು ಶಂಕೆಯಿಲ್ಲದೆ, ಈ ತಡಿಯಿಂದ ಆ ತಡಿಗಂಡನೆಂಬ ಕಾಂಕ್ಷೆಗೆ ಮುಕ್ತಿಸಾಧನವಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.