Index   ವಚನ - 161    Search  
 
ಇಷ್ಟಲಿಂಗ ಇಷ್ಟಲಿಂಗ ಎಂದೆಂಬರು ನೋಡಯ್ಯ, ಇಷ್ಟಲಿಂಗ ಈಗಲೆ ಯಾವುದೆಂದರಿಯರು. ಇಷ್ಟಲಿಂಗ ಈಗಲೆ ಇಂದ್ರಿಯದಲ್ಲಿ ಹುಟ್ಟಿದ ತನುವು. ಪ್ರಾಣಲಿಂಗ ಪ್ರಾಣಲಿಂಗ ಎಂದೆಂಬರು ನೋಡಯ್ಯ, ಪ್ರಾಣಲಿಂಗ ಈಗಲೆ ಯಾವುದೆಂದರಿಯರು. ಪ್ರಾಣಲಿಂಗ ಈಗಲೆ ಪ್ರಾಣದೊಳಿಹ ನೆನಹು. ಇದು ಕಾರಣ[ಎಲೆ ನಮ್ಮ] ಕೂಡಲ ಚೆನ್ನಸಂಗಮದೇವಯ್ಯ, ನಿಮ್ಮ ಶರಣರು ಪ್ರಾಣಲಿಂಗಸಂಬಂಧಿಗಳು.