ಲಿಂಗ ವಿಭೂತಿ ರುದ್ರಾಕ್ಷಿ ಕಟ್ಟಿದವನ,
ಎಂತು ಭಕ್ತನೆಂಬೆ? ಎಂತು ಮುಕ್ತನೆಂಬೆ?
ಅದೇನು ಕಾರಣವೆಂದಡೆ-
ತನ್ನ ಮನೆಯಲ್ಲಿ ಎಕ್ಕನಾತಿ ಮೈಲಾರ ಮಾಯಾರಾಣಿ[ಯ]
ಪೂಜೆಯಂ ಮಾಡಿ,
ಕೊರಳಲ್ಲಿ ಕವಡಿ, ನೊಸಲಲ್ಲಿ ಭಂಡಾರ, ಕೈಯಲ್ಲಿ ದೀವಿಗೆ
ಕೋಲಮಂ ಪಿಡಿದು,
ಕುಣಿಕುಣಿದಾಡುವನ ಎಂತು ಭಕ್ತನೆಂಬೆ? ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.