Index   ವಚನ - 164    Search  
 
ಗುರುಶಿಷ್ಯರ ಸಂಬಂಧವ ಕೇಳಿರಯ್ಯ ಗುರುವು ನಾನೆಂದು ಶಿಷ್ಯನಿಗೆ ಪಾದತೀರ್ಥವ ಕೊಟ್ಟಬಳಿಕ ಆ ಶಿಷ್ಯನ ಇಂದ್ರಿಯ ಚಲನೆ ಆಗಲ್ಯಾತಕ್ಕೊ? ಗುರುವು ನಾನೆಂದು ಪ್ರಸಾದವ ಕೊಟ್ಟಬಳಿಕ ಆ ಶಿಷ್ಯನ ಕಾಯವು ಅಳಿದುಹೋಗಲ್ಯಾತಕ್ಕೊ? ಗುರು ತನ್ನಾತ್ಮಕ್ಕಾಗಿ ಶಿಷ್ಯ ಶಿಷ್ಯ ಎನುತಿರ್ದ. ಶಿಷ್ಯನೀಗ ಬಲುಭಜನೆಯಲ್ಲಿ ಎನ್ನಗುರು ಎನ್ನಗುರು ಎನುತಿರ್ದ, ಕಾಂಚನ ಬಲದಿಂದ ಗುರುವು ಶಿಷ್ಯನಿಗೆ ತಾನೊಂದು ಪಾದತೀರ್ಥ ಪ್ರಸಾದವ ಕೊಟ್ಟಬಳಿಕ, ಇಂದ್ರಿಯ ಚಲನೆಯಾಗಿ ಕಾಯವು ಅಳಿದುಹೋದರೆ ಅವರ ನಾನು ನರಗುರಿಗಳೆಂಬೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.