Index   ವಚನ - 178    Search  
 
ವ್ರತಸ್ಥಲ ವ್ರತಸ್ಥಲ ಎಂಬನ ವ್ರತ ಎಂತಿಪ್ಪುದಯ್ಯ ತಥಾಸ್ತು, ಹೆಣ್ಣು ಬಿಟ್ಟಿದ್ದು ವ್ರತವೆ? ಮಣ್ಣು ಬಿಟ್ಟಿದ್ದು ವ್ರತವೆ? ಹೊನ್ನು ಬಿಟ್ಟಿದ್ದು ವ್ರತವೆ? ಎಲ್ಲರಂತೆ ಮರ್ತ್ಯದೊಳು ಹುಟ್ಟಿ ನಿಲವು (ನಿಜವ?) ಕಾಂಬ ಹುಚ್ಚರು ಬುದ್ಧಿವಂತರು, ತಥಾಸ್ತು. ಪ್ರಭುವಿನ ವಾಕ್ಯ ಚನ್ನಬಸವಗಲ್ಲದೆ ಮಿಕ್ಕವರಿಗೆ ವ್ರತಶೀಲವೆಂತು? ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.