Index   ವಚನ - 179    Search  
 
ಕುಲದಲ್ಲಿ ಉತ್ತಮನಾದರೆ ಎಂತು ಕಾಣಬಹುದಯ್ಯ? ಎಡಬಲ ನೋಡದಾತನ ಕುಲಜ. ಕುಲವ ನೋಡಿಹನೆಂದರೆ ಕುಲವೆಲ್ಲ ಒಂದೇ. ಎಣ್ಣೆಗಾಣಿನಿಂದ ಸಿಕ್ಕಿತ್ತು ಎಂಜಲು. ಹಾಲು ಮೊಸರು ಸಕಲವೆಂಜಲು. ಅಂಗಡಿ ದಾಸಿ ವೇಶ್ಯೆ ಜಗದ ಎಂಜಲು. ಜಗದ ಎಂಜಲು ಹೊಕ್ಕು ಮುಳುಗುವ ಭಾವಿ, ತಾ ಮುನ್ನ ಎಂಜಲು. ಇಂತೀ ಸರ್ವ ಎಂಜಲು ತಿಂದು ಸತ್ತ ಹಾಗೆ ಇರಬೇಕಲ್ಲದೆ, ಕುಲದಲ್ಲಿ ಉತ್ತಮ ಎಂಬಾತನಾದರೆ, ಕುಲವಂ ಬಿಡಬೇಕು, ಮತ್ಸರವಂ ಬಿಡಬೇಕು; ತ್ರಿವಿಧಮಂ ಬಿಟ್ಟು ಅಂಗದೊಳು ನೊಂದು ಬೆಂದು ಐಕ್ಯಾದಾತ ಕುಲಜ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.