Index   ವಚನ - 184    Search  
 
ರೂಪಿಂಗೆ ಪುಟ್ಟಿತು ಶಿಲೆ, ಶಾಪಕ್ಕೆ ಆಯಿತು ಮೂರ್ತಿ ಉಪಾಯ ದಿನಯುಗ ವರ್ತನೆ. ರೂಪಿನ ರೂಪು, ವ್ಯಾಪಾರ ವೇಷಧಾರಿ, ಆಚಾರಿ ಅವಿಚಾರಿ ಶ್ರೀಪಾದ ಗುರುವೆಂದು, ಪಾದತೀರ್ಥ ಪ್ರಸಾದವ ಕೊಳುಕೊಡೆ ಆರಕ್ಕೆ ತ್ರಿವಿಧ ಸಿಕ್ಕೆ, ಅಪರೋಕ್ಷ ಗುರುಶಿಕ್ಷೆ ದೀಕ್ಷೆ ಮೋಕ್ಷ ಮುಕ್ತಾ. ರೂಪಿನೊಳು ಅಹುದು ಅಲ್ಲಾ, ರೂಪಿನೊಳುಇದ್ದು ಇಲ್ಲಾ ಈ ಪ್ರಕಾರ ನಿಮ್ಮ ಕರುಣೆ ಕೃಪೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.