Index   ವಚನ - 183    Search  
 
ಗುರುವ ನರನೆಂದಂಗೆ ಲಿಂಗವ ಶಿಲೆಯಂದಂಗೆ ಜಂಗಮವ ರೂಪು ಎಂದಂಗೆ ಪರವಿಲ್ಲ ಇಹವಿಲ್ಲ. ಪಾಷಾಂಡಿ ಪಾಪದ ಪುಂಜಂಗೆ ವರ ನಿರಾದೀನಂ ಗುರು, ಪರಸ್ಪರಾಧೀನಂ ಲಿಂಗ, ಸ್ಥಿರ ಸರ್ವಜನಾಧೀನಂ ಜಂಗಮ. ವಿರಹಿತ, ಸರ್ವಜನ ವಿರೋಧ, ನಿರುತ ವಿತಾಂತ ತ್ರಿವಿಧ ಗುರು ಲಿಂಗ ಜಂಗಮ ಸುರರಾದಿ ಸಕಲಿರಿಗೆ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.