Index   ವಚನ - 191    Search  
 
ಕೊಡಬಹುದು ಕೊಡಬಹುದು ಉಪದೇಶ ಕ್ರಿಯವ. ಕಾಡಬಾರದು ಕೊಡಬಾರದು ಉಪದೇಶ ಕ್ರಿಯವ. ನಡೆನುಡಿಯ ಅರಿತು ಕೊಂಡವಂಗೆ ಕ್ರಿಯವೇ ಧರ್ಮ; ಅರಿಯದೆ ಕೊಟ್ಟಂವಗೆ ಕ್ರಿಯವೇ ಕರ್ಮ. ಒಡೆಯನ ತೀರ್ಥಪ್ರಸಾದ ಒಕ್ಕುದು ಮಿಕ್ಕುದು,ಕ್ರಿಯಕ್ಕೆ ಸಲ್ಲದು ಹಿಡಿವ ನೈವೇದ್ಯ ಕ್ರಿಯ ಒಡೆಯಂಗೆ ಸಲ್ಲದು. ಬುಡವಿಡಿದು ಕೊನೆಯ ಹತ್ತಿತ್ತು. ನಡೆನುಡಿಗೆ ಕೊಟ್ಟಿದ್ದು ಒಡೆತನವಿಲ್ಲ, ವಸ್ತುಲಿಂಗಕ್ಕೆ ಸಲ್ಲ. ಎಡವಿಬಿದ್ದು ಹಲ್ಲು ಉದುರಿದಂತೆ ಆಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.